•   close
  • ಮುಖಪುಟ
  • ನಮ್ಮ ಬಗ್ಗೆ
  • ಸಂಸ್ಥೆಗಳು
  • ಚಟುವಟಿಕೆ
  • ಹೇಗೆ ಕೆಲಸ ಮಾಡುತ್ತದೆ
  • ಲಾಗಿನ್ ಮಾಡಿ
  • Kannada
    • EN (English)
    • GU (Gujarati)
    • KA (Kannada)
    • HI (Hindi)
  • ಹಿಂದೆ

ಹಿಂದೆ

ಸುದ್ದಿ

Jwalamala News

No Image
Show Original Text Show Translated

ಜಾನಕಲ್ಲು ಕ್ಷೇತ್ರ

ಜಾನಕಲ್ ಗ್ರಾಮವು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕ್ ನಲ್ಲಿ ಇರುವ ಸುಪ್ರಸಿದ್ಧ ಅತಿಶಯ ಕ್ಷೇತ್ರ.  1008 ಶ್ರೀ ನೇಮಿನಾಥ ಸ್ವಾಮಿ ಹಾಗು ಜಗನ್ಮಾತೆಪದ್ಮಾವತಿ ದೇವಿ ನೆಲಸಿರುವ ಈ ಬಸದಿ ಸುಮಾರು 800 ವರ್ಷ ಪುರಾತನವಾದುದ್ದು ಎಂದು ಪ್ರತೀತಿ ಇದೆ. 

ಜಾನಕಲ್ಲು ಕ್ಷೇತ್ರವು ಅಂದಿನ ಕಾಲದಲ್ಲಿ ಬಹು ಸಂಖ್ಯೆಯ ಜೈನ ವಸತಿಗಳನ್ನು ಹೊಂದಿದ್ದು, ಇಲ್ಲಿನ ಬಂಡೆಗಳ ಮೇಲೆ ಜೈನ ಸನ್ಯಾಸಿಗಳು ಧ್ಯಾನಕ್ಕೆ ಕೂರುತ್ತಿದ್ದರೆನ್ನಲಾಗಿದೆ.   ಆದ್ದರಿಂದಲೇ ಈ ಸ್ಥಳಕ್ಕೆ 'ಜೈನ ಕಲ್ಲು' ಎಂದು ಹೆಸರಿತ್ತೆನ್ನಲಾಗಿದೆ.  ಈಗಲೂ ಅಲ್ಲಿನ ಬಂಡೆಯ ಮೇಲೆ ಕೊರೆದ ಜೈನ ಯತಿಗಳ ಚಿತ್ರ ಹಾಗು ಲಿಪಿಗಳನ್ನು ಕಾಣಬಹುದು.  ಇದರಿಂದಲೂ ಈ ಪ್ರದೇಶದಲ್ಲಿ ಜೈನ ಧರ್ಮ ಬಹು ಪ್ರತೀತಿಯಲ್ಲಿ ಇದ್ದಿತೆಂದು ಹೇಳಬಹುದು. 

ಇಲ್ಲಿನ ಬಸದಿಯಲ್ಲಿರುವ ಪದ್ಮಾವತಿ ದೇವಿಯ ಅತಿಶಯ ಪ್ರಸಿದ್ಧವಾದುದು.  ಇಲ್ಲಿ ಬೆಳಿಗ್ಗೆ ಶುದ್ಧ ಮಡಿಯಲ್ಲಿ ದೇವಿ ಪೂಜೆ ಮಾಡಿ ಮನಃ ಪೂರ್ವಕವಾಗಿ ಪ್ರಸಾದ ಕೇಳಲಾಗುತ್ತದೆ.    ದೇವಿ ಮನ ಒಲಿದು ನೀಡಿದ ವರ ಪ್ರಸಾದದಿಂದ ಭಕ್ತರ ಮನೋಕಾಮನೆ ಖಂಡಿತ ನೆರವೇರುತ್ತದೆ ಎಂಬ ನಂಬಿಕೆ ಭಕ್ತಾದಿಗಳಲ್ಲಿ ಇದೆ. 

ಜಾನಕಲ್ ಗ್ರಾಮವು ಬೆಂಗಳೂರಿನಿಂದ ಸುಮಾರು 210 ಕಿಮಿ ದೂರವಿದೆ.  ಬೆಂಗಳೂರಿನಿಂದ ಇಲ್ಲಿಗೆ ತಲುಪಲು ಇರುವ ಮಾರ್ಗಗಳು ಹಲವು -

ತುಮಕೂರು-ಕೆಬಿ ಕ್ರಾಸ್ - ಚಿಕ್ಕನಾಯಕನಹಳ್ಳಿ ಮಾರ್ಗವಾಗಿ ಹೊಸದುರ್ಗ ನಂತರ ಜಾನಕಲ್

ತುಮಕೂರು-ಹಿರಿಯೂರ್-ವಿವಿ ಸಾಗರ ಕ್ರಾಸ್ - ಹೊಸದುರ್ಗ- ಜಾನಕಲ್

ಬೇರೆ ಊರುಗಳಿಂದ ಬರುವವರು ಚಿತ್ರದುರ್ಗ ಅಥವಾ ಹೊಸದುರ್ಗ ಮಾರ್ಗವಾಗಿ ಜಾನಕಲ್ ತಲುಪಬಹುದು.

ಹೊಸದುರ್ಗ ಹಾಗು ಚಿತ್ರದುರ್ಗದಿಂದ ಜಾನಕಲ್ಲಿಗೆ ಸರ್ಕಾರೀ ಹಾಗು ಖಾಸಗಿ ಬಸ್ಸುಗಳ ವ್ಯವಸ್ಥೆ ಇದೆ. ಹೊಸದುರ್ಗದಿಂದ ಜಾನಕಲ್ಲಿಗೆ ಆಟೋರಿಕ್ಷಾಗಳ ವ್ಯವಸ್ಥೆಯು ಇದೆ.  ಪರ ಊರಿನಿಂದ ಬಂದ ಭಕ್ತಾದಿಗಳಿಗೆ ಜಾನಕಲ್ ಬಸದಿ ಬಳಿ ಉಳಿದುಕೊಳ್ಳಲು ವ್ಯವಸ್ಥೆ ಇಲ್ಲಿನ ಟ್ರಸ್ಟ್ ನ ವತಿಯಿಂದ ಒದಗಿಸಲಾಗಿದೆ.  ಉಳಿದುಕೊಳ್ಳಲು ಬಯಸುವ ಭಕ್ತಾದಿಗಳು 2 ದಿನ ಮುಂಚಿತವಾಗಿಯೇ ಟ್ರಸ್ಟ್ ನ ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು.

ಪದ್ಮರಾಜು-

ಸಂಜಯ್ ಗೋಗಿ-

ಬಾಹುಬಲಿ-9880215245

Useful Links

  • ಮುಖಪುಟ
  • ನಮ್ಮ ಬಗ್ಗೆ
  • ಸಂಸ್ಥೆಗಳು
  • ಚಟುವಟಿಕೆ
  • ಹೇಗೆ ಕೆಲಸ ಮಾಡುತ್ತದೆ

ಸುದ್ದಿಪತ್ರ ಸೈನ್‌ಅಪ್

ಕಾರಣಗಳು ಮತ್ತು ದೇಣಿಗೆಗಳ ಕುರಿತು ಇತ್ತೀಚಿನ ನವೀಕರಣಗಳನ್ನು ಪಡೆಯಲು ನಮ್ಮ ಸುದ್ದಿಪತ್ರಕ್ಕೆ ಚಂದಾದಾರರಾಗಿ

ಜೈನ ಸಂಸ್ಥೆಗಳಿಗೆ ವಿಶ್ವ ದರ್ಜೆಯ ಇತ್ತೀಚಿನ ತಂತ್ರಜ್ಞಾನ ಸಕ್ರಿಯಗೊಳಿಸಿದ ವೇದಿಕೆಯನ್ನು ಒದಗಿಸಿ ಮತ್ತು ಅವುಗಳನ್ನು ಒಂದೇ ಸೂರಿನಡಿಗೆ ತರಲು. ಜೈನ ಧರ್ಮದೊಂದಿಗೆ ಮಾಡಬೇಕಾದ ಎಲ್ಲವೂ ಒಂದೇ ಸೂರಿನಡಿ ಮತ್ತು ಎಲ್ಲರಿಗೂ ಲಭ್ಯವಿದೆ. ಯಾವುದೇ ವೆಚ್ಚವಿಲ್ಲದೆ ಎಲ್ಲವನ್ನೂ ಒದಗಿಸಿ.

web counter

info@jaindirect.org

JainDirect.org All right Reserved